ವಿಜಯಪುರ: ವಿಜಯಪುರ ಜಿಲ್ಲೆಯ ಆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏನೇ ನಡೆದ್ರೂ 5.0 ರೇಟ್ನಲ್ಲಿ ಹಣ ನೀಡಬೇಕು. ಅದಕ್ಕಾಗಿ ಎಲ್ಲದಕ್ಕೂ ರೂಲ್ಸ್ ಬ್ರೇಕ್ ಮಾಡಬಹುದು ಎಂದು ಆ ಠಾಣಾ ವ್ಯಾಪ್ತಿಯಿಂದ ದೂರುಗಳು ಕೇಳಿಬರುತ್ತಿವೆ. ಅಲ್ಲದೇ, ಆ ಠಾಣಾ ಅಧಿಕಾರಿಯೋರ್ವ ದಿನನಿತ್ಯ 1 ಲಕ್ಷದ ವರೆಗೂ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳನ್ನು ರಾಜ್ಯಪಾಲರಿಗೆ ಸ್ವತಃ ಆ ಠಾಣಾ ಅಧಿಕಾರಿಗಳು, ಸಿಬ್ಬಂದಿಗಳು ಕಳುಹಿಸಿದ್ದಾರೆ. ಬಾರ್, ಅಕ್ರಮ ಅಕ್ಕಿ ಸಾಗಾಟ, ಸ್ಪಾ, ಮಸಾಜ್, ಸಿಗರೆಟ್, ಮಾವಾ ಮಾರಾಟ ಸೇರಿದಂತೆ ವೈಶ್ಯಾವಾಟಿಕೆ ಸೇರಿದಂತೆ ಎಲ್ಲ ಅಕ್ರಮ ಚಟುವಟಿಕೆಗಳಿಗೆ ರೇಟ್ ಫಿಕ್ಸ್ ಮಾಡಲಾಗಿದೆ ಅಂತೆ. ಇನ್ನು ಆ ಠಾಣಾ ಅಧಿಕಾರಿ ಡ್ರೈವರ್ ಮೂರು ತಿಂಗಳಿಂದ ರಜೆ ಇದ್ರೂ ಕೇವಲ 15 ದಿನ ರಜೆ ತೋರಿಸಲಾಗಿದೆ. ಇದರ ಬಗ್ಗೆ ನಾಳೆ ಸಂಪೂರ್ಣ ಮಾಹಿತಿ ನಮ್ಮಲ್ಲಿ ಮಾತ್ರ.. ವೇಟ್ ಆ್ಯಂಡ್ ಸೀ ಎಲ್ಲರಿಗೂ.. ಇದು ಖಡಕ್ ಪೊಲೀಸ್ ಅಧಿಕಾರಿಯ 161 ಡಿಲಿಂಗ್ ಅಂತೆ.. ಧನ್ಯವಾದಗಳು..