*ಸಾಧನೆ ಎಂಬುವುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ..ಸುರೇಶ್ ಜತ್ತಿ.*
2025-26 ನೆಯ ಪ್ರಸಕ್ತ ಶೈಕ್ಷಣಿಕ ಸಾಲಿಗಾಗಿ ದೇಶದ ಪ್ರತಿಷ್ಠಿತ ವಸತಿ ಶಾಲೆಯಾದ ಅಖಿಲ ಭಾರತೀಯ ಸೈನಿಕ ಶಾಲೆಯ ಪ್ರವೇಶಪೂರ್ವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕವನ್ನು ತೆಗೆದುಕೊಂಡು ಐತಿಹಾಸಿಕ ಸಾಧನೆ ಮಾಡಿದ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ನ ಮಕ್ಕಳಿಗೆ ಸಂಸ್ಥೆಯ
ವತಿಯಿಂದ ಹಮ್ಮಿಕೊಂಡ ವಿಶೇಷ ಸನ್ಮಾನ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ದೇಶದ ಪ್ರತಿಷ್ಠಿತ ವಸತಿ ಶಾಲೆಯಾದ ಸೈನಿಕ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡು ಆಯ್ಕೆಯಾದ ವಿದ್ಯಾರ್ಥಿಗಳಾದ ಅಶ್ವಿಕ ಜಮಖಂಡಿ (272/300) ಹಾಗೂ ಮಲ್ಲಿಕಾರ್ಜುನ ಖಾನಾಪುರ(270/300) ಈರ್ವ ಮಕ್ಕಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿಯವರ ನೇತೃತ್ವದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು... ಈ ಇಬ್ಬರೂ ಮಕ್ಕಳು ಗಣಿತ ವಿಷಯದಲ್ಲಿ ಶೇಕಡ ನೂರಕ್ಕೆ ನೂರರಷ್ಟು ಅಂದರೆ 150/150 ಅಂಕಗಳನ್ನು ಪಡೆದುಕೊಂಡು ಸೈನಿಕ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಯ ಇತಿಹಾಸದಲ್ಲಿಯೇ ಆಂಗ್ಲ ಮಾಧ್ಯಮದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ತೆಗೆದುಕೊಂಡು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ ಎನ್ನಲಾಗಿದೆ... ರಾಜ್ಯಮಟ್ಟದ ಈ ಅಭೂತಪೂರ್ವ ಸಾಧನೆಯನ್ನು ಕೊಂಡಾಡಿ ಈ ಮಕ್ಕಳಿಗೆ ಸಂಸ್ಥೆಯ ವತಿಯಿಂದ 12 ನೆಯ ತರಗತಿಯವರೆಗೆ ಶೇ 50 ರಷ್ಟು ಸಾಲ ಶುಲ್ಕವನ್ನು ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ನ ವತಿಯಿಂದ ಕೊಡಲಾಗುವುದು ಎಂದು ಘೋಷಿಸಿ ಪ್ರಸ್ತುತ ವರ್ಷದ ಶುಲ್ಕದ ಹಣದ ಚೆಕ್ ಅನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು.

ಮಕ್ಕಳ ಈ ಐತಿಹಾಸಿಕ ಸಾಧನೆಗೆ ಪಾಲಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಸಿಹಿ ತಿನ್ನಿಸಿ,ಸನ್ಮಾನಿಸಿ ಮುದ್ದು ಮಕ್ಕಳ ಮುಂದಿನ ಉಜ್ವಲ ಭವಿಷ್ಯ ಯಶಸ್ವಿಯಾಗಲಿ ಎಂದು ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ,ಸಮಾಜ ಸೇವಕ ಶ್ರೀಶೈಲ ಮುಳಜಿ,ಸಂಗಮೇಶ ಪಾಟೀಲ, ಚೇತನ ಮೊಸಗೇರಿ,ಸಿದ್ಧರಾಮ ಖಾನಾಪುರ,ಮುಕ್ತಾ ಖಾನಾಪುರ,ಮಲ್ಲಿಕಾರ್ಜುನ ಜಮಖಂಡಿ,ಶಿವುಕುಮಾರ ಸಿಂದಗಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.